Monday, April 7, 2008

ellections


ರಾಜ್ಯದಲ್ಲಿ ಮತ್ತೆ ಬಂತು ಚುನಾವಣೆ, ಯಾರ ತಪ್ಪಿಗೆ ಮತ್ತೆ ಮತ್ತೆ ಚುನಾವಣೆ?
ಕಾನೂನುಗಳ ರಚನೆ ಮಾಡುವವರು ಯಾರು? ನಾವು ಆರಿಸಿ ಕಳಿಸಿದ ಪ್ರತಿನಿಧಿಗಳು ಅಂದರೆ ಶಾಸಕರು, ಶಾಸಕರ ಮುಖ್ಯ ಕೆಲಸ ಶಾಸನಗಳನ್ನು ಮಾಡುವುದು, ಕನ್ನಡವನ್ನು ಸರಿಯಾಗಿ ಉಚ್ಚರಿಸಲಾಗದ ವ್ಯಕ್ತಿಗಳನ್ನು ಆರಿಸಿ ಕಳಿಸಿದರೆ ಕನ್ನಡದ ಗತಿ ಏನು? ತೆರಿಗೆ ಕಳ್ಳರನ್ನು, ಭೂ ಮಾಫಿಯಾಯದವರನ್ನು, ಕ್ರಿಮಿನಲ್ ಹಿನ್ನಲೆ ಉಳ್ಳವರನ್ನು ಆರಿಸಿ ಕಳುಹಿಸಿದರೆ ಎಂಥಹ ಕಾನುನುಗಳನ್ನು ಅವರಿಂದ ನಾವು ನಿರೀಕ್ಷಿಸಬಹುದು? ಕೇವಲ ಅವರಿಗೆ ಅನುಕೂಲವಾಗುವಂಥಹ ಕಾನುನುಗಳನ್ನು ಮಾತ್ರ ರಚಿಸಿ ಕೊಳ್ಳುವುದಿಲ್ಲವೇ? ಭಾರತ ಸಂವಿಧಾನ ನಮಗೆ ಕೊಟ್ಟಿರುವ ಅಮೂಲ್ಯವಾದ ಹಕ್ಕು ಮತದಾನದ ಹಕ್ಕು, ಈ ಹಕ್ಕನ್ನು ನಾವೆಷ್ಟು ಚಲಾಯಿಸುತ್ತೇವೆ? ಯಾವುದೇ ಪಕ್ಷವನ್ನು ಗಣನೆಯಲ್ಲಿ ಇಟ್ಟುಕೊಳ್ಳದೆ, ಸ್ಪರ್ದಿಯ ಜಾತಿ, ಮತ, ಲಿಂಗವನ್ನು ಪರಿಗಣಿಸದೆ ಯೋಗ್ಯ ವ್ಯಕ್ತಿಗಳನ್ನು ಆರಿಸಿ ಕಳುಹಿಸುವುದು ನಮ್ಮ ಕರ್ತವ್ಯ ಆಗಿದೆ. ಯೋಗ್ಯ ವ್ಯಕ್ತಿಗಳನ್ನು ಆರಿಸಿ ಕಳುಹಿಸಿದರೆ ಮಾತ್ರ ಪ್ರಜಾಪ್ರಭುತ್ವದ ಉಳಿವು, ದೇಶದ ಉಳಿವು, ನಮ್ಮ ಉಳಿವು ಸಾಧ್ಯ.

Technorati Profile








Sunday, April 6, 2008

ದಿ necessity ಆಫ್ laws


ಕಾನೂನುಗಳು ಏಕೆ?
ರಾತ್ರಿಯ ಆಗಸವನ್ನು ಗಮನಿಸಿದಾಗ ಅದರ ಕೊನೆಯೇ ಇಲ್ಲದ ವಿಸ್ತಾರವನ್ನು ಗಮನಿಸಿ ಬೆರಗಾಗಿ ಕೋಟ್ಯಾಂತರ ನಕ್ಷತ್ರಗಳನ್ನು ಹೊದಿರುವ ನಮ್ಮ ಆಕಾಶ ಗಂಗೆ ಯಾವುದರ ಸುತ್ತ ಗಿರಕಿ ಹೊಡೆಯುತ್ತಿರಬಹುದು? ಈ ಬ್ರಹ್ಮಾಂಡದಲ್ಲಿ ಎಷ್ಟು ಕೋಟಿ ಗೆಲಾಕ್ಷಿಗಳು ಇರಬಹುದು? ಎಂದು ಪ್ರಶ್ನಿಸಿ ಕೊಂಡಾಗ ವಿಶ್ವದ ಅಗಾಧತೆಯನ್ನು ಕಲ್ಪಿಸಿಕೊಳ್ಳಲು ನಮ್ಮ ಮನಸ್ಸು ಶಕ್ತ್ಹವಲ್ಲವೇನೋ ಎನಿಸುತ್ತದೆ, ಆದರೆ ಒಂದಂತು ಸತ್ಯ ಅನಂತ ವಿಶ್ವದಲ್ಲಿ ನಮ್ಮ ಭೂಮಿ ಕಡಲ ತಡಿಯಲ್ಲಿ ಬಿದ್ದ ಸಣ್ಣ ಮರಳಿನ ಕಣ, ಅದರೊಳಗೆ ಬದುಕು ಸಾಗಿಸುತ್ತಿರುವ ನಮಗೆ ಬದುಕು ಶಾಶ್ವತ ಎನ್ನುವ ಬ್ರಮೆ. ಬದುಕುವುದು ಕೆಲವೆ ವರ್ಷಗಳಾದರೂ, ಬದುಕು ಕ್ಷಣಿಕ ಎಂದು ಗೊತ್ತಿದ್ದರೂ ಹೊನ್ನು, ಹೆಣ್ಣು ಮತ್ತು ಮಣ್ಣಿಗಾಗಿ ಯುದ್ದಗಳನ್ನು ಮಾಡಿದ, ಹಲವರ ಬದುಕನ್ನು ನಾಶ ಮಾಡಿದ, ಮಾಡುತ್ತಿರುವ ಪ್ರಾಣಿಗಳು (ಕ್ಷಮಿಸಿ ಮಾನವರು) ನಾವು, ಬದುಕು ನೀರ ಮೇಲಣ ಗುಳ್ಳೆ ಎಂಬ ಅರಿವಿದ್ದರು ಹಣ, ಆಸ್ತಿ, ಅಂತಸ್ತು, ಕೀರ್ತಿ ಇತ್ಯಾದಿಗಳ ಸಂಪಾದೆನೆಗಳಿಗಾಗಿ ಕೆಟ್ಟ ಸ್ಪರ್ದೆಗೆ ಬಿದ್ದಿದ್ದೇವೆ, ನಮ್ಮನ್ನು ಮಾನವರು ಎಂದು ಕರೆದು ಕೊಂಡಿರುವುದು ನಾವುಗಳೇ ಆದರೆ ನಮ್ಮಲ್ಲಿ ಪ್ರಾಣಿಗಳ ಸ್ವಭಾವ ಇನ್ನು ಇದ್ದೆ ಇದೆ ಅದನ್ನು ಕೊನೆಯಾಗಿಸುವ ಪ್ರಯತ್ನ ಇನ್ನು ಸಫಲವಾಗಿಲ್ಲ. ಈ ಕ್ಷಣಿಕ ಬದುಕನ್ನು ವ್ಯರ್ಥವಾಗಿ ಕಳೆಯದೆ, ಇನ್ನೊಬ್ಬ ನಮ್ಮ ಬದುಕನ್ನು ವ್ಯರ್ಥಗೊಳಿಸದಂತೆ ನಮ್ಮಗಳ ಶಾಂತಿಯುತ ಸಹಭಾಳ್ವೆಗೆ ಕಾನೂನುಗಳು ಬೇಕು, ಮನುಷ್ಯನ ನಡವಳಿಕೆಗಳನ್ನು ನಿಯಂತ್ರಿಸಲು ಕೆಲವೊಂದು ಕಟ್ಟುಪಾಡುಗಳು ಬೇಕು, ಈ ಕಟ್ಟುಪಾಡುಗಳೇ ಕಾನೂನುಗಳು. ಈ ಕಟ್ಟು ಪಾಡುಗಳನ್ನು ಮೀರಿದವರಿಗೆ ಶಿಕ್ಷೆಯನ್ನು ಯಾವ ರೀತಿ ವಿಧಿಸಬೇಕೆಂದು ಸಹ ಹೇಳುವುದು ಕಾನೂನು. ಮಾನವನು ಕ್ರೂರ ಮೃಗದಂತೆ ವರ್ತಿಸದಂತೆ ಮಾನವನ ನಿಯಂತ್ರಣಕ್ಕೆ ಕಾನೂನುಗಳು ಬೇಕು.

Technorati Profile